ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ಒಂದೊಂದು ಹಬ್ಬಗಳ ಹಿಂದೆಯೂ ಅದರದ್ದೇ ಆದ ಕಥೆಗಳಿವೆ.ಈ ದಿನದಂದು ಚಂದ್ರನನ್ನು ನೋಡಬಾರದೆಂಬ ನಂಬಿಕೆ ಇದೆ. ಸಾಮಾನ್ಯವಾಗಿ ಚಂದ್ರನನ್ನು ಪ್ರತಿ ದಿನ ನಾವು ಗಮನಿಸುವುದಿಲ್ಲ. ಆದ್ರೆ ಭಾದ್ರಪದ ಶುಕ್ಲದ ಚೌತಿಯ ದಿನದಂದು ಮಾತ್ರ ನೋಡಬಾರದೆನಿಸಿದರೂ, ಆಕಸ್ಮಿಕವಾಗಿ ಚಂದ್ರನನ್ನು ನೋಡಿಯೇ ಬಿಡುತ್ತೇವೆ.ಅಂದು ಚಂದ್ರನನ್ನು ನೋಡಿದವರಿಗೆ ಅಪವಾದ ಬರುತ್ತದೆ. ಆದ್ರೆ ಕೃಷ್ಣ ಪಕ್ಷದ ಚೌತಿಯ ಚಂದ್ರನನ್ನು ನೋಡಿದರೆ ಆ ಅಪವಾದ ದೂರವಾಗುತ್ತದೆ ಎಂಬ ನಂಬಿಕೆ ಇಂದಿಗೂ