ಪ್ರಶ್ನೆ: ಮಾನ್ಯರೇ, ನಾನೊಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಮಾಡಬಾರದ ತಪ್ಪು ಮಾಡಿ ನರಳುತ್ತಿದ್ದೇನೆ. ತಾವು ಹಲವು ಬಾರಿ ಉತ್ತಮ ಸಲಹೆ ನೀಡಿ ಸಮಸ್ಯೆಗಳನ್ನು ಸರಿಪಡಿಸಿರುವುದನ್ನು ಓದಿದ್ದೇನೆ. ನನ್ನ ಸಮಸ್ಯೆ ಏನೆಂದರೆ, ನನ್ನ ಪರಿಚಯದ ಗಂಡ ಬಿಟ್ಟಿರುವ ಸ್ತ್ರೀಯೊಬ್ಬರು ನನ್ನ ಸ್ನೇಹಿತನಿಗೆ ಸಾಲವಾಗಿ ಒಂದಷ್ಟು ಹಣ ನೀಡಿದ್ದರು. ಆತ ಹಣ ಮರಳಿಸದೇ ಇದ್ದಾಗ, ನನ್ನ ಬಳಿ ಬಂದು ಸಮಸ್ಯೆ ಹೇಳಿಕೊಂಡು ಅವರ ಹಣ ಮರಳಿ ಸಿಗುವಂತೆ ಮಾಡಬೇಕೆಂದು ಕೇಳಿಕೊಂಡಿದ್ದರು. ಅದರಂತೆ ನಾನು