ಸಾಮಾನ್ಯವಾಗಿ ನಮ್ಮಲ್ಲಿ ಹಲವರಿಗೆ ಹಿತ್ತಲಗಿಡ ಮದ್ದಲ್ಲ ಎಂದೇ ಭಾವನೆ. ನಮ್ಮ ನಮ್ಮ ಮನೆಯಂಗಳದಲ್ಲಿ ಬೆಳೆಯುವ ಎಷ್ಟೋ ಗಿಡಗಳು ಮಾನವನ ಆರೋಗ್ಯಕ್ಕೆ ಬೇಕಾಗುವ ಔಷಧೀಯ ಗುಣಗಳನ್ನು ಹೊಂದಿರುತ್ತವೆ ಎಂಬ ವಿಷಯವನ್ನೇ ಮರೆತಿರುತ್ತೇವೆ. ಅಂತಹ ಗಿಡಗಳ ಸಾಲಿಗೆ 'ಮುಟ್ಟಿದರೆ ಮುನಿ' ಗಿಡವೂ ಕೂಡಾ ಸೇರಿಕೊಳ್ಳುತ್ತದೆ. ಹೆಸರೇ ಹೇಳುವಂತೆ ಈ ಗಿಡದ ಎಲೆಗಳು ಮುಟ್ಟಿದರೆ ಮುದುಡಿಕೊಳ್ಳುತ್ತವೆ. ಇಂಗ್ಲಿಷ್ನಲ್ಲಿ ಇದಕ್ಕೆ ಟಚ್ ಮಿ ನಾಟ್ ಎಂದೇ ಹೆಸರು.