ಒಂಬತ್ತು ದಿನಗಳಲ್ಲಿ ದೇವಿಯ ವಿವಿಧ ರೂಪಗಳನ್ನು ನಾವು ಆರಾಧನೆ ಮಾಡುತ್ತೇವೆ. ಪ್ರತಿದಿನ ವಿವಿಧ ರೀತಿಯಲ್ಲಿ ಪೂಜೆಗಳನ್ನು ಮಾಡಲಾಗುತ್ತದೆ. ಹಾಘೆಯೇ ವಿಭಿನ್ನ ಭಕ್ಷ್ಯಗಳನ್ನು ಸಹ ಮಾಡುತ್ತೇವೆ. ಆದರೆ ಒಂದೊಂದು ದಿನಕ್ಕೂ ಒಂದೊಂದು ವಿಶೇಷತೆ ಇದ್ದು, ಆ ದಿನ ನಿರ್ದಿಷ್ಟವಾದ ನೈವೇದ್ಯವನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಯಾವ ನೈವೇದ್ಯವನ್ನು ಯಾವಾಗ ಮಾಡಬೇಕು ಎಂಬುದು ಇಲ್ಲಿದೆ. ನವರಾತ್ರಿಯಲ್ಲಿ ನೀವು ದೇವಿಗೆ ಅತ್ಯಂತ ಭಕ್ತಿಯಿಂದ ನೂವೇದ್ಯ ಮಾಡಿ ಅರ್ಪಿಸುವುದನ್ನು ತಾಯಿ ಸ್ವೀಕರಿಸುತ್ತಾಳೆ