ಯುರೋಪಿಯನ್ ರಾಷ್ಟ್ರಗಳಲ್ಲಿ ಒಮಿಕ್ರಾನ್ ಸೋಂಕು ವ್ಯಾಪಕವಾಗುತ್ತಿದ್ದಂತೆ ಆರೋಗ್ಯ ತಜ್ಞರು ಭಾರತದಲ್ಲಿಯೂ ಸಮುದಾಯ ಹರಡುವಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.ಪ್ರಸ್ತುತ ಮಹಾರಾಷ್ಟ್ರವು (ಭಾರತದಲ್ಲಿ ಅತಿ ಹೆಚ್ಚು ಒಮಿಕ್ರಾನ್ ಪ್ರಕರಣಗಳನ್ನು ಹೊಂದಿದ್ದು ರಾಜಧಾನಿ ದೆಹಲಿ ಎರಡನೇ ಸ್ಥಾನದಲ್ಲಿದೆ. ಕೊವಿಡ್ನ ಡೆಲ್ಟಾ ರೂಪಾಂತರಕ್ಕಿಂತ ಒಮಿಕ್ರಾನ್ ರೂಪಾಂತರದ ಹರಡುವಿಕೆ ಹೆಚ್ಚು ಎಂದು ಹೇಳಲಾಗಿದ್ದರೂ, ಮತ್ತೊಂದು ರೂಪಾಂತರವು ಈಗ ಮುಂಚೂಣಿಗೆ ಬಂದಿದೆ.ಅದೇ ಡೆಲ್ಮಿಕ್ರಾನ್. ಡೆಲ್ಮಿಕ್ರಾನ್ ಕೊವಿಡ್ನ ಡಬಲ್ ರೂಪಾಂತರಿಯಾಗಿದ್ದು ಇದು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಹರಡುತ್ತಿದೆ. ಕೊರೊನಾದ ಡೆಲ್ಟಾ