ಮೂತ್ರದ ಸೋಂಕು ಇತ್ತೀಚೇಗೆ ಹಲವು ಮಂದಿಯನ್ನು ಕಾಡುತ್ತಿರುವ ದೈಹಿಕ ಸಮಸ್ಯೆ. ಆದರೆ ಗರ್ಭಿಣಿಯರಿಗೆ ಈ ಸೋಂಕು ನರಕಯಾತನೆ ನೀಡುತ್ತದೆ. ಬ್ಯಾಕ್ಟೀರಿಯಾ ಸೋಂಕಿನಿಂದ ಇದು ಕಾಣಿಸಿಕೊಳ್ಳುತ್ತದೆ. ಇದರಿಂದ ಕಿಡ್ನಿಗೂ ಹಾನಿಯಾಗುತ್ತದೆ. ಹಾಗಾಗಿ ಈ ಸೋಂಕು ತಗುಲದಂತೆ ಎಚ್ಚರದಿಂದ ವಹಿಸಬೇಕಾಗುತ್ತದೆ. ಮೂತ್ರ ವಿಸರ್ಜನೆ ವೇಳೆ ಉರಿಯೂತ, ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು ಇವೆಲ್ಲವೂ ಮೂತ್ರದ ಸೋಂಕಿನ ಸಾಮಾನ್ಯ ಲಕ್ಷಣಗಳು. ಇದು ಹೆಚ್ಚಾಗಿ ಗರ್ಭಿಣಿಯರಿಗೆ ತಗುಲುವುದು ಸರ್ವೇ ಸಾಮಾನ್ಯವಾಗಿದೆ. ಮೂತ್ರದ ಸೋಂಕಿಗೆ ಕಾರಣಗಳು