ದಿನನಿತ್ಯದ ಜೀವನದಲ್ಲಿ ಏನಾದರೂ ಒಂದು ಘಟನೆಗಳು ಸಂಭವಿಸುತ್ತಿರುತ್ತದೆ ಅದು ಸಹಜ ಕೂಡಾ, ಆದರೆ ಅದು ಮಾನವನ ಬದುಕಿನ ಚಿಂತನೆಗಳನ್ನೇ ಬದಲಾಯಿಸುವ ಸಾಮರ್ಥವನ್ನು ಹೊಂದಿರಬಹುದು. ಅಂತಹ ಕೆಲವು ಸಂಗತಿಗಳನ್ನು ಅರಿಯುವ ಸಲುವಾಗಿಯೇ ಮನಶಾಸ್ತ್ರದಲ್ಲಿ ಮೊದಲೇ ಕೆಲವೊಂದು ಸಂಗತಿಗಳ ಕುರಿತು ವಿವರಿಸಲಾಗಿದೆ. ಇದರ ಮೂಲಕ ವ್ಯಕ್ತಿಗಳ ನಡವಳಿಕೆ, ಅವರ ಅಂತರಾಳದ ಭಾವನೆಗಳನ್ನು ನಾವು ಕಂಡುಕೊಳ್ಳಬಹುದಾಗಿದೆ. ಅಂತಹ ಸಂಗತಿಗಳನ್ನು ನಾವು ಗಮನಿಸಿದಾಗ ಅದು ನಮ್ಮ ಸುತ್ತಮುತ್ತ ಇರುವ ವ್ಯಕ್ತಿ ಇಲ್ಲವೇ ನಮ್ಮ ಜೀವನದಲ್ಲಿ ನಾವು