Widgets Magazine

ತೆಂಗಿನ ಎಣ್ಣೆಯಲ್ಲಿವೆ ಹಲವಾರು ಪ್ರಯೋಜನಗಳು...!!! ನಿಮಗೆ ಗೊತ್ತೇ?

ಬೆಂಗಳೂರು| nagashree| Last Modified ಶುಕ್ರವಾರ, 13 ಜುಲೈ 2018 (14:30 IST)
ನಮಗೆಲ್ಲರಿಗೂ ತೆಂಗಿನ ಎಣ್ಣೆ ಅಂದರೆ ಕೇವಲ ತಲೆಗೂದಲಿನ ಆರೈಕೆಗೆ ಮಾತ್ರ ಬಳಕೆಯಾಗುತ್ತದೆ ಎನ್ನೋ ಭಾವನೆ ಇದೆ ಅಲ್ವಾ? ಅಯ್ಯೋ ಆಯ್ಲಿ ಫುಡ್ ಕಣ್ರೀ, ಸುಮ್ಮನೆ ಕೋಲೆಸ್ಟ್ರಾಲ್ ಜಾಸ್ತಿ ಆಗುತ್ತೆ ಕಣ್ರೀ ತೆಂಗಿನ ಎಣ್ಣೆ ಉಪಯೋಗಿಸಿದ್ರೆ ದಪ್ಪ ಆಗ್ತೀವಂತೆ ಕಣ್ರೀ ಅಂತ ಕೆಲವರು ಹೇಳೋದನ್ನ ಕೇಳಿರ್ತಿವಿ ಅದರೆ ನಿಯಮಿತವಾಗಿ, ಶುದ್ಧವಾದ ತೆಂಗಿನ ಎಣ್ಣೆಯನ್ನು ನಮ್ಮ ಅಡಿಗೆ ಹಾಗೂ ದಿನನಿತ್ಯದಲ್ಲಿ ಬಳಸುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ನಿಮಗೆ ಗೊತ್ತಾ? ಇಲ್ಲಿದೆ ವರದಿ...
ಇತ್ತೀಚೆಗೆ ನಮ್ಮ ಹೆಂಗಳೆಯರು ಅಡುಗೆ ಮಾಡೋವಾಗ ತೆಂಗಿನ ಎಣ್ಣೆಯನ್ನು ಉಪಯೋಗಿಸುವುದರ ಬದಲು ನಾನಾ ತರಹದ ರಿಫೈನರಿ ಎಣ್ಣೆಗಳನ್ನು ಬಳಸುತ್ತಾರೆ. ಅಷ್ಟೇ ಅಲ್ಲ ನಮ್ಮ ಚರ್ಮಗಳನ್ನು ಕಾಪಾಡಿಕೊಳ್ಳಲು ನಾನಾ ರೀತಿಯ ಕ್ರಿಮ್‌ಗಳನ್ನು ಬಳಸುತ್ತೇವೆ ಆದರೆ ತೆಂಗಿನ ಎಣ್ಣೆಯಲ್ಲಿಯೂ ಕೂಡಾ ಆರೋಗ್ಯಕ್ಕೆ ಬೇಕಾದ ಹಲವಾರು ಅಂಶಗಳಿರುತ್ತವೆ ಎಂದರೆ ನೀವು ನಂಬಲೇಬೇಕು.
 
* ಚರ್ಮದ ಆರೋಗ್ಯಕ್ಕೆ ತೆಂಗಿನ ಎಣ್ಣೆ ಬಹು ಉಪಕಾರಿ: 
ತೆಂಗಿನ ಎಣ್ಣೆಯು ಅತ್ಯುತ್ತಮ ಮಸಾಜ್ ಎಣ್ಣೆಯಾಗಿದ್ದು, ಶುಷ್ಕ ಚರ್ಮವನ್ನೂ ಒಳಗೊಂಡಂತೆ ಎಲ್ಲಾ ರೀತಿಯ ಚರ್ಮಕ್ಕೆ ಪರಿಣಾಮಕಾರಿ ಮೋಯ್‌ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಸೋರಿಯಾಸಿಸ್ , ಡರ್ಮಟೈಟಿಸ್, ಎಸ್ಜಿಮಾ, ಮತ್ತು ಇತರ ಚರ್ಮದ ಸೋಂಕುಗಳು ಸೇರಿದಂತೆ ವಿವಿಧ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದು ಸಹಾಯ ಮಾಡುತ್ತದೆ. ಈ ನಿಖರವಾದ ಕಾರಣಕ್ಕಾಗಿ, ತೆಂಗಿನ ಎಣ್ಣೆಯನ್ನು ಚರ್ಮದ ಆರೈಕೆಗಾಗಿ ಬಳಸಲಾಗುವ ಸೋಪ್‌ಗಳು, ಲೋಷನ್‌ಗಳು ಮತ್ತು ಕ್ರೀಮ್‌ಗಳಂತಹ ವಿವಿಧ ದೇಹದ ಆರೈಕೆ ಉತ್ಪನ್ನಗಳ ಮೂಲ ಪದಾರ್ಥವನ್ನಾಗಿ ಬಳಲಾಗುತ್ತಿದೆ.
 
* ಉರಿಯೂತ ಮತ್ತು ಸಂಧಿವಾತವನ್ನು ಕಡಿಮೆ ಮಾಡುತ್ತದೆ:
ಭಾರತದಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಕಚ್ಚಾ ತೆಂಗಿನ ಎಣ್ಣೆಯಲ್ಲಿ ಕಂಡುಬರುವ ಉನ್ನತ ಮಟ್ಟದ ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡುತ್ತವೆ ಮತ್ತು ಪ್ರಮುಖ ಔಷಧಿಗಳಿಗಿಂತ ಸಂಧಿವಾತ ಚಿಕಿತ್ಸೆಗೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಇತ್ತೀಚಿನ ಮತ್ತೊಂದು ಅಧ್ಯಯನದಲ್ಲಿ, ಸಾಧಾರಣ ಬಿಸಿ ಮಾಡಿದ ತೆಂಗಿನ ಎಣ್ಣೆಯಲ್ಲಿ ಉರಿಯೂತದ ಕೋಶಗಳನ್ನು ನಿಗ್ರಹಿಸುವ ಅಂಶ ಕಂಡುಬಂದಿದೆ. ಇದು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.
 
* ತೆಂಗಿನ ಎಣ್ಣೆಯು ಹಾನಿಕಾರಕ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತದೆ:
ತೆಂಗಿನ ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಶಿಲೀಂಧ್ರಗಳು ಸೇರಿದಂತೆ ಹಾನಿಕಾರಕ ರೋಗಕಾರಕಗಳನ್ನು ಕೊಲ್ಲುತ್ತವೆ ಮತ್ತು ಅದರಿಂದ ಬರುವ ಸೋಂಕುಗಳನ್ನು ತಡೆಗಟ್ಟಲು ಸಹಾಯಕಾರಿಯಾಗಿದೆ.
 
* ಚರ್ಮದ ಸಮಸ್ಯೆಗಳನ್ನು ಸುಧಾರಿಸುತ್ತದೆ: 
ತೆಂಗಿನ ಎಣ್ಣೆ ಮುಖದ ಕ್ಲೆನ್ಸರ್, ಮಾಯಿಶ್ಚರುಸರ್ ಮತ್ತು ಸೂರ್ಯನ ಪರದೆಯಂತೆ ಅದ್ಭುತವಾಗಿದೆ, ಆದರೆ ಇದು ಅನೇಕ ಚರ್ಮದ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಬಹುದು. ತೆಂಗಿನ ಎಣ್ಣೆಯಲ್ಲಿನ ಕೊಬ್ಬಿನಾಮ್ಲಗಳು (ಕ್ಯಾಪ್ರಿಲಿಕ್ ಮತ್ತು ಲಾರಿಕ್) ಆಂತರಿಕವಾಗಿ ಮತ್ತು ಬಾಹ್ಯವಾಗಿ ಮತ್ತು ಆರ್ದ್ರತೆಯನ್ನು ಉಂಟುಮಾಡುತ್ತವೆ, ಇದರಿಂದಾಗಿ ಅವು ಎಲ್ಲಾ ರೀತಿಯ ಚರ್ಮದ ಪರಿಸ್ಥಿತಿಗಳಿಗೆ ಉತ್ತಮ ಪರಿಹಾರವನ್ನು ನೀಡುತ್ತವೆ.
 
* ಕೂದಲಿನ ಆರೈಕೆಗೆ: 
ತೆಂಗಿನ ಎಣ್ಣೆಯು ಕೂದಲಿಗೆ ಅತ್ಯುತ್ತಮ ಕಂಡಿಷನರ್ ಮತ್ತು ಹಾನಿಗೊಳಗಾದ ಕೂದಲಿನ ಮರು-ಬೆಳವಣಿಗೆಗೆ ಸಹಾಯ ಮಾಡುವ ದಿವ್ಯ ಔಷಧ ಎಂದೇ ಹೇಳಬಹುದು. ಇದು ಹಾನಿಗೊಳಗಾದ ಕೂದಲ ಪೋಷಣೆ ಮತ್ತು ಅದಕ್ಕೆ ಬೇಕಾದ ಪ್ರೋಟೀನ್‌ಗಳನ್ನು ಒದಗಿಸುತ್ತದೆ ಹಾಗೂ ಕೂದಲಿಗೆ ಉತ್ತಮ ರಕ್ಷಣೆ ನೀಡುವುದರ ಜೊತೆಗೆ ಕೂದಲು ಉದುರುವಿಕೆಯ ಸಮಸ್ಯೆಯನ್ನು ನಿವಾರಿಸುತ್ತದೆ. ನಿಯಮಿತವಾಗಿ ತೆಂಗಿನ ಎಣ್ಣೆಯಿಂದ ತಲೆಯನ್ನು ಮಸಾಜ್ ಮಾಡಿದರೆ ಸೊಂಪಾದ ಹೊಳಪಿನ ಕೂದಲನ್ನು ಪಡೆಯಬಹುದು.
 
* ಕಣ್ಣು ವರ್ತುಲ:
ಕೊಬ್ಬರಿ ಎಣ್ಣೆಯ ಕಣ್ಣ ಕೆಳಗಿನ ಕಪ್ಪು ವರ್ತುಲವನ್ನು ನಿವಾರಿಸುವ ಗುಣವನ್ನು ಹೊಂದಿದೆ. ಪ್ರತಿನಿತ್ಯ ಇದನ್ನು ಕಪ್ಪು ವರ್ತುಲ ಇರುವ ಪ್ರದೇಶದಲ್ಲಿ ಹಚ್ಚಿಕೊಂಡು ಉಗುರುಬೆಚ್ಚಗಿನ ನೀರಿನಿಂದ ಸೋಪು ಬಳಸಿ ಮುಖವನ್ನು ತೊಳೆದುಕೊಳ್ಳುವ ಮೂಲಕ ಕಪ್ಪುವರ್ತುಲವನ್ನು ತೊಲಗಿಸಲು ಸಹಾಯಕಾರಿಯಾಗಿದೆ.
 
* ಹಲ್ಲಿನ ಆರೈಕೆಗೆ: 
ಕ್ಯಾಲ್ಸಿಯಂ ನಮ್ಮ ಹಲ್ಲಿನ ಪ್ರಮುಖ ಅಂಶವಾಗಿದೆ. ದೇಹದಿಂದ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ತೆಂಗಿನ ಎಣ್ಣೆಯು ಸುಲಭಗೊಳಿಸುತ್ತದೆ. ಆದ್ದರಿಂದ, ಇದು ಬಲವಾದ ಹಲ್ಲುಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೇ ದಂತಕ್ಷಯ ನಿವಾರಣೆಯಲ್ಲೂ ಇದು ಸಹಾಯಕಾರಿಯಾಗಿದೆ.
 
*ಮೇಕಪ್ ತೆಗೆದುಹಾಕಲು
ಇದು ಮೇಕಪ್ ತೆಗೆದುಹಾಕಲು ಸಹ ತುಂಬಾ ಸಹಾಯಕಾರಿಯಾಗಿದೆ. ಮೇಕಪ್ ಮಾಡಿಕೊಂಡಿರುವ ಚರ್ಮದ ಮೇಲೆ ಕೊಬ್ಬರಿ ಎಣ್ಣೆಯನ್ನು ಹಾಕಿ ಸ್ವಲ್ಪ ಹೊತ್ತು ಬಿಟ್ಟು ಹತ್ತಿಯ ಉಂಡೆಗಳಿಂದ ಒರೆಸುವ ಮೂಲಕ ನೈಸರ್ಗಿಕವಾಗಿ ಯಾವುದೇ ಹಾನಿ ಇಲ್ಲದೇ ಮೇಕಪ್ ಅನ್ನು ತೆಗೆದುಹಾಕಬಹುದಾಗಿದೆ.
 
ಇಷ್ಟೆಲ್ಲಾ ಪ್ರಯೋಜನಕಾರಿ ಅಂಶಗಳನ್ನು ಹೊಂದಿರುವ ತೆಂಗಿನ ಎಣ್ಣೆಯನ್ನು ನಿಮ್ಮ ದಿನನಿತ್ಯದ ಆಹಾರ ಪದಾರ್ಥದಲ್ಲಿ ಬಳಸಿ ಉತ್ತಮವಾದ ಅರೋಗ್ಯ ನಿಮ್ಮದಾಗಿಸಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :