ಗುರುಗಳು ಗುರುಕುಲದಲ್ಲಿ ತಮ್ಮ ಶಿಷ್ಯರೊಡನೆ ಮಾತನಾಡುತ್ತ ಕುಳಿತಿದ್ದರು. ಆಗ ತಕ್ಷಣ ಅವರು, ಎಲ್ಲರೂ ಗಮನವಿಟ್ಟು ಕೇಳಿ. ನಿಮಗೊಂದು ಸಮಸ್ಯೆಯನ್ನು ಹೇಳುತ್ತಿದ್ದೇನೆ. ಅದರ ನಿಜವಾದ ಅರ್ಥವನ್ನು ಯಾರಾದರೂ ಹೇಳ ಬಲ್ಲಿರಾ ಎಂದು ಕೇಳಿದರು. ಎಲ್ಲರೂ ಶಾಂತರಾಗಿ ಗುರುಗಳ ಮಾತನ್ನು ಕೇಳತೊಡಗಿದರು. ಗುರುಗಳು ಒಂದು ಕಥೆಯನ್ನು ಹೇಳಿದರು. ಒಬ್ಬ ಮನುಷ್ಯ ದೇವರನ್ನು ಪ್ರಾರ್ಥಿಸಿದಾಗ ಅವನು ಭೂಮಿಯ ಮೇಲೆ ಬದುಕಿ ಉಳಿಯುವ ದಿನಗಳು ಹೆಚ್ಚಿಲ್ಲ ಎಂದು ಗೊತ್ತಾಯಿತು. ಅವನಿಗೆ ಭಯ, ದುಃಖ ಆದವು.