ದಾಂಪತ್ಯದಲ್ಲಿ ಸರಳ, ವಿರಸ, ಜಗಳ ಎಲ್ಲವೂ ಇರುತ್ತದೆ. ಸುಖ, ಸಂತೋಷ, ಕೋಪ, ದುಃಖ ಸಂಸಾರದ ಅವಿಭಾಜ್ಯ ಅಂಗ ಎಂದರೂ ತಪ್ಪಾಗಲಾರದು.ಜಗಳವಾಡುವ ದಂಪತಿಗಳೆಲ್ಲಾ ಪರಸ್ಪರ ಬೇರಾಗುತ್ತಾರೆ ಎನ್ನಲಾಗುವುದಿಲ್ಲ. ಅನ್ಯೋನ್ಯವಾಗಿರುವವರು ಜೀವನಪೂರ್ತಿ ಹಾಗೆಯೇ ಇರುತ್ತಾರೆ ಎಂದುಕೊಳ್ಳುವುದೂ ತಪ್ಪು.ಕೆಲವೊಂದು ಸನ್ನಿವೇಶಗಳು ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವಾಗುತ್ತವೆ. ಸಾಮಾನ್ಯವಾಗಿ ವಿಚ್ಛೇದನಕ್ಕೆ ಇವೇ ಮುಖ್ಯ ಕಾರಣಗಳಾಗಿರುತ್ತವೆ.ಸಂವಹನದಾಂಪತ್ಯದಲ್ಲಿ ಸಂವಹನ ಎಂದರೆ, ಜಗಳ ಮಾಡುವುದು, ವಾದಕ್ಕಿಳಿಯುವುದು, ಅಸಮಾಧಾನ ವ್ಯಕ್ತಪಡಿಸುವುದಲ್ಲ. ಸಂಸಾರದಲ್ಲಿ ಮೌನ ವಹಿಸುವುದೂ ಸರಿಯಲ್ಲ. ಈ ನಡೆ ಪ್ರತ್ಯೇಕತೆ ಮತ್ತು