ಈ ಸಪ್ಲಿಮೆಂಟ್ಗಳಿಗೆ ಅನಿಯಂತ್ರಿತ ಮಾರುಕಟ್ಟೆ ಇದೆ. ಎಲ್ಲರೂ ಅಲ್ಲದಿದ್ದರು, ಕೆಲವು ಆಹಾರ ತಜ್ಞರು, ಜಿಮ್ ಮತ್ತು ಅಲ್ಲಿನ ತರಬೇತಿದಾರರು ಇದನ್ನು ಮಾರುವ ಏಜೆಂಟುಗಳಾಗಿರುತ್ತಾರೆ. ಇಂತಹ ಹೆಚ್ಚಿನ ಸಪ್ಲಿಮೆಂಟ್ಗಳಲ್ಲಿ ‘ಚೈನೀಸ್ ಗಿಡಮೂಲಿಕೆಗಳು’, ‘ಕೊರಿಯನ್ ಗಿಡಮೂಲಿಕೆಗಳು’ ಮತ್ತು ಆಯುರ್ವೇದಿಕ್ ಇತ್ಯಾದಿ ಲೇಬಲ್ಗಳು ಇರುತ್ತವೆ. ಸ್ನಾಯುಗಳ ಬೆಳವಣಿಗೆ ಹೆಚ್ಚಿಸುತ್ತವೆ ಅಥವಾ ತೂಕ ಇಳಿಸುತ್ತವೆ ಎಂದು ಹೇಳಿಕೊಳ್ಳುವ ಗಿಡಮೂಲಿಕೆಗಳ ಮತ್ತು ಡಯೆಟರಿ ಸಪ್ಲಿಮೆಂಟ್ಗಳನ್ನು ಬಳಕೆಯಿಂದ ಪಿತ್ತ ಜನಕಾಂಗದ ಹಾನಿಗೆ ಒಳಗಾಗಿ ಆಸ್ಪತ್ರೆಗೆ ಸೇರುತ್ತಿರುವ ರೋಗಿಗಳ ಸಂಖ್ಯೆ