ಬೆಂಗಳೂರು: ಮಗುವೊಂದು ತಾಯಿ ಗರ್ಭದಿಂದ ಹೊರ ಬಂದ ತಕ್ಷಣ ಮಾಡುವ ಕೆಲಸವೆಂದರೆ, ಗಂಟಲು ಬಿರಿಯುವಂತೆ ಅಳುವುದು. ಹುಟ್ಟಿದ ತಕ್ಷಣ ಮಗು ಅಳುವುದು ಯಾಕೆ ಗೊತ್ತಾ? ತಾಯಿ ಹೊಟ್ಟೆಯಲ್ಲಿದ್ದಾಗ ಮಗು 9 ತಿಂಗಳೂ ಲಯಬದ್ಧವಾಗಿ ಕೇಳುವ ತಾಯಿಯ ಹೃದಯ ಬಡಿತವನ್ನು ಕೇಳುತ್ತಾ ತನ್ಮಯವಾಗಿರುತ್ತಿತ್ತು . ಆ ಶಬ್ಧ ತನಗೆ ರಕ್ಷಣೆ ನೀಡುತ್ತದೆ ಎಂದೇ ಭಾವಿಸುತ್ತದೆ.ಆದರೆ ಹೊರ ಪ್ರಪಂಚಕ್ಕೆ ಬಂದ ತಕ್ಷಣ ಆ ಶಬ್ಧ ದೂರವಾಗಿ ಅದಕ್ಕೆ ತಾನೇನೋ ಅಸುರಕ್ಷಿತ ಜಾಗಕ್ಕೆ