ಅವಳು ರಾತ್ರಿಯಾದರೆ ಆ ಥರ ಮಾಡೋದ್ಯಾಕೆ?

ಬೆಂಗಳೂರು| Jagadeesh| Last Modified ಶುಕ್ರವಾರ, 30 ಆಗಸ್ಟ್ 2019 (18:49 IST)
ಪ್ರಶ್ನೆ: ಸರ್ ನಾನು ಮದುವೆಯಾಗಿ ಒಂದು ತಿಂಗಳಾಗಿದೆ. ಆದರೆ ಈವರೆಗೂ ನನ್ನ ಹೆಂಡತಿ ಜತೆಗೆ ಸಂಭೋಗ ನಡೆಸಿಲ್ಲ.

ಪ್ರತಿದಿನ ರಾತ್ರಿ ಆಗುತ್ತಿದ್ದಂತೆ ಆಕೆ ತಲೆ ನೋವು, ಕೈ ನೋವು, ಹೊಟ್ಟೆ ನೋವು ಅಂತೆಲ್ಲಾ ಹೇಳುತ್ತಿದ್ದಾಳೆ. ನನ್ನನ್ನು ಅವಳ ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲ. ಅವಳಿಗೆ ಅಕ್ರಮ ಸಂಬಂಧ ಇರೋ ಶಂಕೆ ವ್ಯಕ್ತವಾಗುತ್ತಿದೆ. ಮುಂದೆ ಮಾಡೋದೇನು?

ಉತ್ತರ: ಮದುವೆಯಾದ ಮೇಲೆ ಮನಸ್ಸು ಹೊಂದಿಕೊಳ್ಳಲು ಸಮಯ ಬೇಕು. ನಿಮ್ಮ ಪತ್ನಿ ನಿಮಗೆ, ನಿಮ್ಮ ಮನೆಗೆ ಹೊಂದಿಕೊಳ್ಳಲು ಅವಕಾಶ ನೀಡಿ. ಆತುರ ಪಡಬೇಡಿ.

ಅವಳು ನಿಮ್ಮ ಜತೆ ಲೈಂಗಿಕ ಕ್ರಿಯೆ ನಡೆಸಿಲ್ಲ ಅಂದರೆ ಅವಳು ದಾರಿ ತಪ್ಪಿದ್ದಾಳೆ ಅಂತ ಭಾವಿಸಬೇಡಿ. ಅವಳ ಜತೆ ಏಕಾಂತದಲ್ಲಿ ಕುಳಿತು ಅವಳನ್ನು ಕೇಳಿ ಮನಸ್ಸಿನ ಆಸೆಗಳನ್ನು ಕೇಳಿ. ಇದು ನಿಜವಾಗಲೂ ಸಮಸ್ಯೆಯೇ ಅಲ್ಲ.


ಇದರಲ್ಲಿ ಇನ್ನಷ್ಟು ಓದಿ :