ತೆಳ್ಳಗಾಗುವುದು ಎಷ್ಟು ಕಷ್ಟವೋ ಹಾಗೇ ದಪ್ಪಗಾಗುವುದು ಕೂಡಾ ಕಷ್ಟ. ದಿನನಿತ್ಯ ಬಹಳಷ್ಟು ಜನರು ತೂಕವನ್ನು ಕಳೆದುಕೊಳ್ಳುವ ಬಗ್ಗೆ ಮಾತನಾಡುವುದನ್ನು ನಾವು ಕೇಳುತ್ತೇವೆ. ಆದರೆ ಕಡಿಮೆ ತೂಕದಿಂದ ಬಹಳ ತೊಂದರೆಗಳನ್ನು ಅನುಭವಿಸಿ, ಇದರಿಂದ ಮುಕ್ತಿ ಪಡೆದು ತೂಕವನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಿರುವ ಜನರೂ ಸಹ ಇದ್ದಾರೆ. ಮಾರುಕಟ್ಟೆಯಲ್ಲಿ ತೂಕ ಹೆಚ್ಚಿಸಿಕೊಳ್ಳಲು ಕೆಲವು ದುಬಾರಿ ಉತ್ಪನ್ನಗಳೂ ಸಹ ಲಭ್ಯವಿದೆ. ಅದರೆ ಬಹಳ ಮುಖ್ಯವಾಗಿ ನೈಸರ್ಗಿಕವಾಗಿ, ಯಾವುದೇ ಅಡ್ಡ ಪರಿಣಾಮವಿಲ್ಲದೇ ತೂಕವನ್ನು ಹೆಚ್ಚಿಸಿಕೊಳ್ಳಲು ಹಲವಾರು ವಿಧಾನಗಳಿವೆ.