ಕಣ‍್ಣು ರೆಪ್ಪೆಯ ಕೂದಲು ದಪ್ಪವಾಗಿ ಬೆಳೆಯಲು ಇದನ್ನು ಹಚ್ಚಿ

ಬೆಂಗಳೂರು| pavithra| Last Modified ಶನಿವಾರ, 24 ಏಪ್ರಿಲ್ 2021 (06:49 IST)
ಬೆಂಗಳೂರು : ಕಣ‍್ಣುಗಳು ನಮ್ಮ ಮುಖದ ಸೌಂದರ್ಯದ ಪ್ರಮುಖ ಭಾಗವಾಗಿದೆ. ಕಣ‍್ಣುಗಳ ಸೌಂದರ್ಯವು ಕಣ‍್ಣುಗಳ ಆಕಾರ, ಅದರ ದಪ್ಪವಾದ ಕಣ‍್ಣು ರೆಪ್ಪೆಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಕೆಲವರು ಹುಡುಗಿಯರು ಕಣ‍್ಣು ರೆಪ್ಪೆಗಳು ದಪ್ಪವಾಗಿ ಕಾಣಲು ನಕಲಿ ಹುಬ್ಬುಗಳನ್ನು ಅಂಟಿಸಿಕೊಳ್ಳುತ್ತಾರೆ. ಅದರ ಬದಲು ರೆಪ್ಪೆಯ ಕೂದಲು ದಪ್ಪವಾಗಿ ಬೆಳೆಯಲು ಈ ಟಿಪ್ಸ್ ಫಾಲೋ ಮಾಡಿ.

*ಪ್ರತಿದಿನ ರಾತ್ರಿ ಹರಳೆಣ್ಣೆ, ತೆಂಗಿನೆಣ್ಣೆ, ಸಾಸಿವೆ ಎಣ್ಣೆ ಮುಂತಾದವುಗಳಿಂದ ಕಣ್ಣಿನ ರೆಪ್ಪೆಗಳ ಮೇಲೆ ಮಸಾಜ್ ಮಾಡುತ್ತಾ ಬನ್ನಿ. ಇದರಿಂದ ರೆಪ್ಪೆ ಕೂದಲು ಉದ್ದವಾಗಿ, ದಪ್ಪವಾಗಿ ಬೆಳೆಯುತ್ತದೆ.

*ಪ್ರತಿದಿನ ರಾತ್ರಿ ಕಣ್ಣಿನ ರೆಪ್ಪೆಗಳನ್ನು ಪೆಟ್ರೋಲಿಯಂ ಜೆಲ್ಲಿಯಿಂದ ಮಸಾಜ್ ಮಾಡಿ. ಇದರಿಂದ ಕೂಡ ರೆಪ್ಪೆ ಕೂದಲು ಉದ್ದವಾಗಿ, ದಪ್ಪವಾಗಿ ಬೆಳೆಯುತ್ತದೆ.

*ವಿಟಮಿನ್ ಇ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ಇದು  ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

*ಗ್ರೀನ್ ಟೀ ಬ್ಯಾಗ್ ಗಳನ್ನು ನೀರಿನಲ್ಲಿ ನೆನೆಸಿ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಇದು ರೆಪ್ಪೆಯ ಕೂದಲು ಉದ್ದವಾಗಿ ಬೆಳೆಯಲು ಸಹಕರಿಸುತ್ತದೆ.ಇದರಲ್ಲಿ ಇನ್ನಷ್ಟು ಓದಿ :