ಅರಿಶಿನ ಹಾಲಿನ ವಿಸ್ಮಯ ಆರೋಗ್ಯ ಪ್ರಯೋಜನಗಳು

ದೆಹಲಿ| Sudha| Last Modified ಸೋಮವಾರ, 15 ಆಗಸ್ಟ್ 2016 (10:05 IST)
ಇಂದಿನ ದಿನಗಳಲ್ಲಿ ಸಂಶೋಧನೆಗಳು ಎಷ್ಟೇ ನಡೆದರೂ ಕೆಲವೊಂದು ಬಾರಿ ಹಳ್ಳಿ ಮದ್ದು ಎಲ್ಲಾ ರೋಗಗಳಿಗೆ ಥಟ್ಟನೆಯ ಪರಿಣಾಮ ನೀಡುತ್ತದೆ. ನಿಮಗೆಲ್ಲಾ ಗೊತ್ತಿರುವ ಹಾಗೇ ಅರಶಿನ ಹಾಲು ಆಂಟಿ ಆಕ್ಸಿಡೆಂಟ್ ಹೊಂದಿರುತ್ತದೆ. ಅರಶಿನ ಹಾಗೂ ಹಾಲು ಎರಡು ಉತ್ತಮವಾದ ಪ್ರತಿಜೀವಕ ಗಳಾಗಿವೆ. ನಿತ್ಯವು ಅರಶಿನ ಹಾಲು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು..

ಅದರಲ್ಲಿ 6 ಸರ್‌ಪ್ರೈಜ್ ನೀಡಬಹುದಾದ ಅರಶಿನ ಹಾಲಿನ ಪ್ರಯೋಜನಗಳು ಇಲ್ಲಿವೆ

1. ಇನ್ನೂ ಅರಶಿನ ಹಾಲು ಕುಡಿಯುವದರಿಂದ ಸ್ತನ ಕ್ಯಾನ್ಸರ್, ಚರ್ಮ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಹಲವು ಸಂಬಂಧಿತ ರೋಗಗಳನ್ನು ನಿವಾರಿಸಬಲ್ಲ ಶಕ್ತಿ ಅರಶಿನ ಹಾಲಿನಲ್ಲಿದೆ.

2. ಇನ್ನೂ ಶೀತ ಹಾಗೂ ಕೆಮ್ಮಿಗೆ ಉತ್ತಮ ಪರಿಹಾರ ಎಂಜು ಪರಿಗಣಿಸಲಾಗಿದೆ. ಅರಶಿನ ಹಾಲು ವೈರಸ್ ವಿರೋಧಿ ಮತ್ತು ಬ್ಯಾಕ್ಟೇರಿಯಾ ನಿರೋಧಕ ಗುಣಗಳನ್ನು ಹೊಂದಿರುವ ಕಾರಣ ಕೆಮ್ಮು, ನೆಗಡಿ, ನೋಯುತ್ತಿರುವ ಗಂಟಲು, ಕೆಮ್ಮು, ಶೀತಕ್ಕೆ ತ್ವರಿತ ಪರಿಹಾರ ನೀಡಬಲ್ಲದ್ದು.

3. ಇದು ಸಂಧಿವಾತದಂತಹ ಸಮಸ್ಯೆಗಳನ್ನು ಮತ್ತು ಹೊಟ್ಟೆ ಹುಣ್ಣನ್ನು ನಿವಾರಿಸಬಲ್ಲದ್ದಾಗಿದೆ. ಇದು ನೋವಿಗೆ ಪರಿಹಾರವನ್ನು ಒದಗಿಸುತ್ತದೆ.

4. ಆಯುರ್ವೇದ ಸಂಪ್ರದಾಯಗಳಲ್ಲಿ ಅರಶಿನ ಹಾಲಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ರಕ್ತ ಶುದ್ಧೀಕರಣ ಮಾಡಲು ಮತ್ತು ರಕ್ತ ಪರಿಚಲನೆ ಹೆಚ್ಚಿಸುತ್ತದೆ.

5.ಅಲ್ಲದೇ ಮೂಳೆಗಳ ಧೃಡತೆಗೆ ಅರಶಿನ ಹಾಲು ಸಹಾಯಕಾರಿಯಾಗುತ್ತದೆ. ಮೂಳೆಗಳನ್ನು ಬಲವಾಗಿ ಇರಿಸಿಕೊಳ್ಳಲು ಸಹಾಯ ಮಾಡುವ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಭಾರತ ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ನಿತ್ಯವು ಅರಶಿನದ ಹಾಲನ್ನೇ ಕುಡಿಯುತ್ತಾರೆ.

6.ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆ ನೋವು ಮೊದಲಾದ ಎಲ್ಲಾ ಸಮಸ್ಯೆಗಳಿಗೆ ಅರಿಶಿನದ ಬಿಸಿ ಹಾಲು ಸಹಾಯ ಮಾಡುತ್ತದೆ.

ಅರಶಿನದ ಹಾಲು ತಯಾರಿಸುವುದು...
ಒಂದು ಲೋಟ ಹಸುವಿನ ಹಾಲಿಗೆ ಸುಮಾರು ಅರ್ಧ ಚಮಚಾ ಅಥವಾ ಒಂದು ಚಮಚಾದಷ್ಟು ಅರಶಿನ ಪುಡಿ ಹಾಕಿ ಕುದಿಯಲು ಆರಂಭವಾದ ಬಳಿಕ ಇಳಿಸಿ ತಣ್ಣಗಾಗಲು ಬಿಡಿ. ಇದಕ್ಕೆ ಸ್ವಲ್ಪ ಜೇನನ್ನು ಸೇರಿಸಬಹುದು.ಇದರಲ್ಲಿ ಇನ್ನಷ್ಟು ಓದಿ :