ಕೋವಿಡ್-19 ವೈರಸ್ ಹಾವಳಿಯಿಂದಾಗಿ ಸುಮಾರು ಒಂದೂವರೆ ವರ್ಷದಿಂದ ಬಹುತೇಕ ಕಂಪೆನಿಗಳು ತಮ್ಮ ಕಟ್ಟಡಗಳಿಗೆ ಬೀಗ ಹಾಕಿದ್ದು, ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮೊದಲಿಗೆ ಹೆಚ್ಚಿನವರಿಗೆ ಮನೆಯಿಂದ ಕೆಲಸ ಮಾಡುವುದು ತುಂಬಾ ಕಷ್ಟಕರ ಎನಿಸಿದರೂ, ನಿಧಾನವಾಗಿ ಇದಕ್ಕೆ ಹೊಂದಿಕೊಂಡಿದ್ದಾರೆ. ಮನೆಯಿಂದ ಕೆಲಸ ಮಾಡುತ್ತಿದ್ದರೆ ಹೆಂಡತಿ ಮಕ್ಕಳೊಂದಿಗೆ ಸ್ವಲ್ಪ ಸಮಯ ದೊರೆಯುತ್ತದೆ ಮತ್ತು ಹಾಳಾದ ಟ್ರಾಫಿಕ್ನಲ್ಲಿ ಆಫೀಸಿಗೆ ಹೋಗಿ ಬರುವುದು ತಪ್ಪಿತು ಎಂದು ನಿಟ್ಟುಸಿರು ಬಿಟ್ಟದ್ದುಂಟು. ಆದರೆ ಒಂದು ವರ್ಷ ಕಳೆದ ಬಳಿಕ