ಬೆಂಗಳೂರು: ಮದ್ಯಪಾನ ಎನ್ನುವುದು ಬಿಡಲಾರದ ಚಟ. ಆದರೆ ಈ ಚಟ ನಿಮ್ಮ ಹೃದಯ ಹಾಳು ಮಾಡುವುದು ಖಂಡಿತಾ. ಹೀಗೆಂದು ಹೊಸದೊಂದು ಸಂಶೋಧನೆ ಹೇಳಿದೆ.ಮದ್ಯಪಾನ ಅತಿಯಾದರೆ, ಹೃದಯಾಘಾತವಾಗುವ ಸಂಭವ ಹೆಚ್ಚು ಎಂದು ನೂತನ ಅಧ್ಯಯನ ತಿಳಿಸಿದೆ. ಇದು ಮಾತ್ರವಲ್ಲ, ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಜತೆಗೇ ಬರುತ್ತದೆ ಎಂದು ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿವಿ ಸಂಶೋಧಕರು ಕಂಡುಕೊಂಡಿದ್ದಾರೆ.14.7 ಮಿಲಿಯನ್ ಜನರ ಮೇಲೆ ಅಧ್ಯಯನ ನಡೆಸಿ ಸಂಶೋಧಕರು ಈ ಸತ್ಯ ಪತ್ತೆ ಮಾಡಿದ್ದಾರೆ.