ಉತ್ತಮ ಆರೋಗ್ಯಕ್ಕೆ ಕೇವಲ ಹಸಿರು ಜ್ಯೂಸ್ಗಳು ಮಾತ್ರ ಆಯ್ಕೆಗಳಲ್ಲ. ನಿಮ್ಮ ಆಹಾರದಲ್ಲಿ ದಾಳಿಂಬೆಯನ್ನು ಸೇರಿಸಿಕೊಂಡರೆ ಅದು ದೀರ್ಘಕಾಲಿಕ ರೋಗ ಮತ್ತು ಉರಿಯೂತದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ದಾಳಿಂಬೆ ಹಣ್ಣನ್ನು ಸಾವಿರಾರು ವರ್ಷಗಳಿಂದ ಔಷಧವಾಗಿ ಬಳಸಲಾಗುತ್ತಿದೆ. ದಾಳಿಂಬೆ ರಸವು ಕ್ಯಾನ್ಸರ್ ತಡೆಗಟ್ಟಲು, ಪ್ರತಿರಕ್ಷಣಾ ಬೆಂಬಲ ಮತ್ತು ಫಲವತ್ತತೆಗೆ ಸಹಾಯ ಮಾಡಬಹುದಾಗಿದೆ. ದಾಳಿಂಬೆಯು ಹೆಚ್ಚಿನ ವಿಟಮಿನ್ ಸಿ ಮತ್ತು ವಿಟಮಿನ್ ಇ ಪ್ರಮಾಣವನ್ನು ಹೊಂದಿದೆ. ಹಾಗಾಗಿ ದಾಳಿಂಬೆ ರಸದ ಉಪಯೋಗಗಳನ್ನು ತಿಳಿದುಕೊಳ್ಳಬೇಕಿದೆ.