ಬೆಂಗಳೂರು: ಕೆಲವರಿಗೆ ವರ್ಷ ಪೂರ್ತಿ ಶೀತದ ಸಮಸ್ಯೆ. ಸದಾ ಪಕ್ಕದಲ್ಲಿ ನ್ಯಾಪ್ ಕಿನ್ ಇಟ್ಟುಕೊಳ್ಳಲೇಬೇಕು. ಹೀಗೆ ಪದೇ ಪದೇ ಶೀತವಾಗುವುದಕ್ಕೆ ಕಾರಣಗಳೇನಿರಬಹುದು ಗೊತ್ತಾ? ಮುಖ್ಯವಾಗಿ ಅಸಮತೋಲಿತ ಆಹಾರ. ಹೆಚ್ಚು ಸಕ್ಕರೆಯ ಅಂಶವುಳ್ಳ ಆಹಾರ ಸೇವನೆ ಮಾಡುವುದರಿಂದ ಗುಣಮುಖರಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಹಣ್ಣು ತರಕಾರಿ ಮತ್ತು ಸೊಪ್ಪು ತರಕಾರಿ ಹಾಗೂ ಚಿಕನ್ ಸೂಪ್ ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದು ಶೀತಕ್ಕೆ ಪರಿಹಾರ.ನಾವು ನಿರ್ಜಲೀಕರಣಕ್ಕೊಳಗಾಗುವುದು ಕಷ್ಟವೇನಲ್ಲ. ಸಣ್ಣ ಅನಾರೋಗ್ಯಕ್ಕೆ ತುತ್ತಾದರೂ ದೇಹ ನಿರ್ಜಲೀಕರಣಕ್ಕೊಳಗಾಗುತ್ತದೆ.