ತುಟಿಯ ಮೇಲ್ಭಾಗದ ಕೂದಲು ನಿವಾರಣೆಯಾಗಲು ಈ ಮನೆಮದ್ದನ್ನು ಹಚ್ಚಿ

ಬೆಂಗಳೂರು| pavithra| Last Modified ಮಂಗಳವಾರ, 1 ಡಿಸೆಂಬರ್ 2020 (07:33 IST)
ಬೆಂಗಳೂರು : ಕೆಲವು ಮಹಿಳೆಯರಿಗೆ ತುಟಿಯ ಮೇಲ್ಭಾಗದಲ್ಲಿ ಕೂದಲು ಬೆಳೆಯುತ್ತದೆ. ಇದು ನೋಡಲು ತುಂಬಾ ಅಸಹ್ಯವಾಗಿ ಕಾಣುತ್ತದೆ. ಈ ಕೂದಲಿನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

-1 ಚಮಚ ಹಾಲು ಮತ್ತು 1 ಚಮಚ ಅರಿಶಿನ ಪುಡಿಯನ್ನು ಮಿಕ್ಸ್ ಮಾಡಿ ತುಟಿಯ ಮೇಲ್ಭಾಗದ ಕೂದಲಿಗೆ ಹಚ್ಚಿ. ವಾರದಲ್ಲಿ ಮೂರು ಬಾರಿ ಮಾಡಿ.

-ಮೊಸರಿಗೆ ½ ಚಮಚ ಅರಿಶಿನ  ಮತ್ತು ಕಡಲೆ ಹಿಟ್ಟು ಹಾಕಿ ತುಟಿಯ ಮೇಲ್ಭಾಗದ ಕೂದಲಿಗೆ ಹಚ್ಚಿ. ಇದರಿಂದ ಕೂದಲು ಉದುರಿ ಹೋಗುತ್ತದೆ.

-ಆಲೂಗಡ್ಡೆ ಸಿಪ್ಪೆ ತೆಗೆದು ತುರಿದು ಅದರಿಂದ 2 ಚಮಚ ರಸ ತೆಗೆದು ಅದನ್ನು ತುಟಿಯ ಕೂದಲಿಗೆ ಹಚ್ಚಿ. ಹೀಗೆ 2 ವಾರ ಮಾಡಿದ್ದಲ್ಲಿ ಬೇಡದ ಕೂದಲು ಉದುರುತ್ತದೆ.



ಇದರಲ್ಲಿ ಇನ್ನಷ್ಟು ಓದಿ :