Widgets Magazine

ಚಳಿಗಾಲದಲ್ಲಿ ತುಟಿಗಳು ಡ್ರೈಯಾಗಿ ಒಡೆಯುವುದನ್ನು ತಡೆಯಲು ಈ ಲಿಪ್ ಬಾಮ್ ಹಚ್ಚಿ

ಬೆಂಗಳೂರು| pavithra| Last Modified ಭಾನುವಾರ, 22 ನವೆಂಬರ್ 2020 (06:14 IST)
ಬೆಂಗಳೂರು : ಚಳಿಗಾಲದಲ್ಲಿ ತುಟಿಗಳು ಹೆಚ್ಚಾಗಿ ಡ್ರೈ ಆಗಿ ಒಡೆಯುತ್ತದೆ. ಹಾಗಾಗಿ ತುಟಿಗಳನ್ನು ಮೃದುಗೊಳಿಸಲು ತೆಂಗಿನೆಣ್ಣೆ ತುಂಬಾ ಸಹಕಾರಿ. ಹಾಗಾಗಿ ತೆಂಗಿನೆಣ್ಣೆಯಿಂದ ಲಿಪ್ ಬಾಮ್ ತಯಾರಿಸಿ.

1 ಚಮಚ ಪೆಟ್ರೋಲಿಯಂ ಜೆಲ್ಲಿಯನ್ನು ಬಿಸಿ ಮಾಡಿ ಅದಕ್ಕೆ 1 ಚಮಚ ತೆಂಗಿನೆಣ್ಣೆ ಮಿಕ್ಸ್ ಮಾಡಿ. 20 ನಿಮಿಷಗಳ ಕಾಲ ಫ್ರೀಜ್ ಮಾಡಿ. ಇದನ್ನು ತುಟಿಗಳಿಗೆ ಹಚ್ಚಿದರೆ  ತುಟಿಗಳು ಮೃದುವಾಗಿ ಹೊಳೆಯುತ್ತದೆ.

ಹಾಗೇ 1 ಚಮಚ ಕೋಕೋ ಬೆಣ್ಣೆಯನ್ನು ಕರಗಿಸಿ ಅದಕ್ಕೆ 2 ಚಮಚ ತೆಂಗಿನೆಣ್ಣೆ ಮಿಕ್ಸ್ ಮಾಡಿ ಇದನ್ನು 30 ನಿಮಿಷಗಳ ಕಾಲ ಫ್ರೀಜ್ ಮಾಡಿ. ಇದನ್ನು ತುಟಿಗೆ ಹಚ್ಚಿದರೆ ತುಟಿಗಳು ಮೃದುವಾಗುತ್ತವೆ.ಇದರಲ್ಲಿ ಇನ್ನಷ್ಟು ಓದಿ :