ಇಂಟರ್ನೆಟ್ ಎಂಬುದು ಚಟವಾಗಿ ಮಾರ್ಪಟ್ಟರೆ ಅದರಿಂದಾಗುವ ಅನಾಹುತಗಳೇನು ಎಂಬ ಬಗೆಗೀಗ ಚಿಂತಿಸಲಾಗುತ್ತಿದೆ. ಅಪರಿಮಿತ ಆಫರ್ಗಳೊಂದಿಗೆ ಹಲವಾರು ಕಂಪನಿಗಳು ಅತಿ ವೇಗದ ಬ್ರಾಡ್ಬ್ಯಾಂಡ್ ಮುಂತಾದ ಸಂಪರ್ಕಗಳನ್ನು ಕಡಿಮೆ ಬೆಲೆಯಲ್ಲಿ ನೀಡುತ್ತವೆ. ಕಂಪ್ಯೂಟರ್ ಎಂಬುದೀಗ ಸಾಮಾನ್ಯವಾಗಿರುವಾಗ ಮಕ್ಕಳು ಸುಲಭವಾಗಿ ಇದರ ದಾಸರಾಗುತ್ತಿದ್ದಾರೆ. ಬರಬರುತ್ತಾ ಕಂಪ್ಯೂಟರ್-ಇಂಟರ್ನೆಟ್ ಇಲ್ಲದೆ ಮಕ್ಕಳು ಚಡಪಡಿಸುವುದನ್ನೂ ನಾವು ಕಂಡಿದ್ದೇವೆ. ಅಲ್ಲಿ ಗೇಮ್ಸ್, ಬ್ಲಾಗಿಂಗ್, ಅಶ್ಲೀಲ ಚಿತ್ರ ವೀಕ್ಷಣೆ ಮುಂತಾದುವುಗಳಿಗೇ ಹೆಚ್ಚಿನ ಗಮನ ಕೊಟ್ಟು ಕಾಲಹರಣ ಮಾಡುವುದನ್ನು ಹೆತ್ತವರು ಕೂಡ ನಿರ್ಲಕ್ಷ್ಯ ಮಾಡುತ್ತಾರೆ.