ಇಂಟರ್ನೆಟ್ ಎಂಬುದು ಚಟವಾಗಿ ಮಾರ್ಪಟ್ಟರೆ ಅದರಿಂದಾಗುವ ಅನಾಹುತಗಳೇನು ಎಂಬ ಬಗೆಗೀಗ ಚಿಂತಿಸಲಾಗುತ್ತಿದೆ. ಅಪರಿಮಿತ ಆಫರ್ಗಳೊಂದಿಗೆ ಹಲವಾರು ಕಂಪನಿಗಳು ಅತಿ ವೇಗದ ಬ್ರಾಡ್ಬ್ಯಾಂಡ್ ಮುಂತಾದ ಸಂಪರ್ಕಗಳನ್ನು ಕಡಿಮೆ ಬೆಲೆಯಲ್ಲಿ ನೀಡುತ್ತವೆ. ಕಂಪ್ಯೂಟರ್ ಎಂಬುದೀಗ ಸಾಮಾನ್ಯವಾಗಿರುವಾಗ ಮಕ್ಕಳು ಸುಲಭವಾಗಿ ಇದರ ದಾಸರಾಗುತ್ತಿದ್ದಾರೆ.