ಬೆಂಗಳೂರು: ನಾವು ಸಾಕಷ್ಟು ನೀರು ಕುಡಿದರೆ ಮಾತ್ರ ಆರೋಗ್ಯದಿಂದಿರಲು ಸಾಧ್ಯ ಎನ್ನುವುದೇನೋ ನಿಜ. ಆದರೆ ಊಟದ ನಡುವೆ ಆಗಾಗ ಹೊಟ್ಟೆ ತುಂಬಾ ನೀರು ಕುಡಿಯುವುದು ಒಳ್ಳೆಯದಲ್ಲ. ಕಾರಣಗಳೇನು ತಿಳಿದುಕೊಳ್ಳೋಣ.ನೀರು ಕುಡಿಯದೇ ಇದ್ದರೆ ಗಂಟಲು ಕಟ್ಟಿದಂತಾಗುತ್ತದೆ. ಊಟದ ತಟ್ಟೆ ಬಲಗಡೆ ನೀರಿನ ಲೋಟ ಇರಲೇಬೇಕೆನ್ನುವವರು ಇದನ್ನು ಒಮ್ಮೆ ಗಮನಿಸಿ. ಬಾಯಾರಿಕೆಯಾಗುತ್ತದೆಂದು ಊಟದ ಸಮಯದಲ್ಲಿ ನೀರು ಕುಡಿಯಬೇಡಿ. ಊಟದ ಮೊದಲು ಅಥವಾ ನಂತರ ನೀರು ಕುಡಿಯುವುದು ಜೀರ್ಣಕ್ರಿಯೆಗೆ ಉತ್ತಮ.ಹಾಗಂತ ಒಂದೆರಡು ಗುಟುಕು ನೀರು