ಶೀತಲಗಾಳಿ ಜೊತೆಗೆ ಮಳೆ ದಿನನಿತ್ಯ ಇರುವುದರಿಂದ ದೇಹದ ಆರೋಗ್ಯದಲ್ಲಿ ಬದಲಾವಣೆ ಕಂಡುಬರುವುದು ಸಾಮಾನ್ಯವಾಗಿದೆ. ಹೀಗಾಗಿ ನಮ್ಮ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಲು ಮತ್ತು ಎದುರಾಗುವ ಸಣ್ಣಪುಟ್ಟ ಸೋಂಕುಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಆಯುರ್ವೇದ ಡಿಕಾಕ್ಷನ್? •ವಿವಿಧ ಬಗೆಯ ದಿನ ಬಳಕೆಯ ಮಸಾಲೆ ಪದಾರ್ಥಗಳನ್ನು ಹಾಗೂ ಆಯುರ್ವೇದ ಪದಾರ್ಥಗಳನ್ನು ನೀರಿನಲ್ಲಿ ಸ್ವಲ್ಪ ಕಾಲ ಕುದಿಸಿ ಅದರಿಂದ ಬರುವ ಸಾರವನ್ನು ದಿನದಲ್ಲಿ ಹಲವು ಬಾರಿ