ಸೂಪರ್ ಫುಡ್ ವಿಭಾಗಕ್ಕೆ ಸೇರಿದ ಬಾಳೆಹಣ್ಣು ಬಹಳ ಜನಪ್ರಿಯ ಹಣ್ಣು. ಇದು ಪ್ರತಿ ಋತುವಿನಲ್ಲೂ ಎಲ್ಲೆಡೆ ಸುಲಭವಾಗಿ ಸಿಗುವಂತಹ ಹಣ್ಣು. ಇದು ಇತರ ಹಣ್ಣುಗಳಿಗಿಂತ ಅಗ್ಗವಾಗಿದೆ ಮತ್ತು ತ್ವರಿತ ಶಕ್ತಿಯನ್ನು ನೀಡುವ ಅತ್ಯುತ್ತಮ ಆಹಾರವೆಂದು ಪರಿಗಣಿಸಲಾಗಿದೆ. ಬಾಳೆಹಣ್ಣಿನಲ್ಲಿ ಜೀವಸತ್ವಗಳು, ಖನಿಜಗಳು ಸಮೃದ್ಧವಾಗಿವೆ. ಇದು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಇದನ್ನು ನಿಯಮಿತವಾಗಿ ಸೇವಿಸಿದರೆ, ರಕ್ತದೊತ್ತಡವನ್ನು ಸರಿಯಾಗಿ ಇರಿಸಿಕೊಳ್ಳಬಹುದು ಹಾಗೂ ಕ್ಯಾನ್ಸರ್ ನಂತಹ ಗಂಭೀರ ರೋಗಗಳಿಂದಲೂ ರಕ್ಷಿಸಬಹುದು.