ಬೆಂಗಳೂರು: ಬಾಳೆದಿಂಡಿನಲ್ಲಿರುವಷ್ಟು ಪೋಷಕಾಂಶಗಳು ಬೇರೆಲ್ಲೂ ಸಿಗದು. ಅಷ್ಟೇ ಏಕೆ, ಹೊಟ್ಟೆಯ ಬೊಜ್ಜು ಕರಗಿಸಲು ಬಯಸುವವರೂ ಈ ಆರೋಗ್ಯಕರ ಪಾನೀಯವನ್ನು ಸೇವಿಸಿದರೆ ಒಳಿತು.ಹೀಗಂತ ಆರೋಗ್ಯ ತಜ್ಞರೇ ಹೇಳುತ್ತಾರೆ. ಬಾಳೆದಿಂಡಿನ ಜ್ಯೂಸ್ ಗೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿಕೊಂಡು ಸೇವಿಸಿದರೆ ಹೊಟ್ಟೆ ಕರುಗುವುದು ಮಾತ್ರವಲ್ಲ, ಕಿಡ್ನಿ ಕಲ್ಲು ಮುಂತಾದ ಸಮಸ್ಯೆಯೂ ದೂರವಾಗುತ್ತದೆ.ಬಾಳೆದಿಂಡಿನ ಜ್ಯೂಸ್ ನಲ್ಲಿ ಕೊಲೆಸ್ಟ್ರಾಲ್, ಸೋಡಿಯಂ ಅಂಶವಿರುವುದಿಲ್ಲ. ಅಲ್ಲದೆ ಕ್ಯಾಲೊರಿಯೂ ಕಡಿಮೆ. ಹೀಗಾಗಿ ತೂಕ ಕಳೆದುಕೊಳ್ಳಲು ಬಯಸುವವರಿಗೆ ಇದು ಹೇಳಿ ಮಾಡಿಸಿದ