ಬೆಂಗಳೂರು : ಬೆಳಗಿನ ಉಪಹಾರ ಸೇವಿಸದೇ ಇರುವ ಅಭ್ಯಾಸ ಹೊಂದಿದವರು, ಅದನ್ನು ಶೀಘ್ರವೇ ಬದಲಾವಣೆ ಮಾಡಿಕೊಳ್ಳಿ. ಇಲ್ಲದೇ ಇದ್ದರೆ ಬೊಜ್ಜು ಖಂಡಿತಾ ಹೆಚ್ಚಾಗುತ್ತದೆಯಂತೆ. ಹೌದು, ಬೆಳಗಿನ ಉಪಹಾರ ಸೇವಿಸದೇ ಇದ್ದಲ್ಲಿ ಬೊಜ್ಜು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಾರೆ ಅಮೆರಿಕದ ಮೇಯೊ ಕ್ಲಿನಿಕ್ ನ ಸಂಶೋಧಕರು. ಬೆಳಗಿನ ಉಪಹಾರ ಸೇವಿಸದೇ ಇರುವವರನ್ನು ಉಪಹಾರ ಸೇವಿಸುವವರೊಂದಿಗೆ ಹೋಲಿಕೆ ಮಾಡಲಾಗಿದ್ದು, ಉಪಹಾರ ಸೇವನೆ ಮಾಡದೇ ಇದ್ದ ಶೇ.26.7 ರಷ್ಟು ಜನರಲ್ಲಿ ಬೊಜ್ಜು ಹೆಚ್ಚಾಗಿರುವುದು ಅಧ್ಯಯನ