ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಕಣ್ಣಿನ ದೃಷ್ಟಿ ಕಳೆದುಕೊಳ್ಳವುದು ಸಹಜ. ಆದರೆ ಕೆಲವರು ಸಣ್ಣ ವಯಸ್ಸಿನಲ್ಲಿಯೇ ದೃಷ್ಟಿದೋಷವನ್ನು ಎದುರಿಸುತ್ತಾರೆ. ಹೌದು ಕೆಲವೊಮ್ಮೆ ನಿಮ್ಮ ಪ್ರತಿನಿತ್ಯದ ಕೆಲವು ಅಭ್ಯಾಸಗಳು ನಿಮ್ಮ ಕಣ್ಣಿನ ಸಮಸ್ಯೆಗೆ ಕಾರಣವಾಗಬಹುದು. *ಅವಸರದಲ್ಲಿ ಸನ್ ಗ್ಲಾಸ್ ಗಳನ್ನು ಧರಿಸದೆ ಸೂರ್ಯನ ಬಿಸಿಲಿನಲ್ಲಿಯೇ ಹೊರಗೆ ಹೋಗುವುದು, ಇದರಿಂದ ಸೂರ್ಯನ ಕಿರಣಗಳಲ್ಲಿರುವ ಅಲ್ಟ್ರಾ ವೈಲೆಟ್ ಕಣ್ಣಿನ ಪೊರೆಗಳ ಮೇಲೆ ಹಾನಿಯನ್ನುಂಟುಮಾಡುತ್ತದೆ. *ಇಡೀ ದಿನ ಹಾಗೂ ರಾತ್ರಿ ಮಲಗುವಾಗಲೂ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸಿದರೆ