ನಮ್ಮ ದೇಹ ಅತಿ ಸುಲಭವಾಗಿ ಜೀರ್ಣಿಸಿಕೊಳ್ಳುವ ಆಹಾರವೆಂದರೆ ನೀರು. ಅದು ಬಿಟ್ಟರೆ ಮೊಸರು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ ಹಾಲನ್ನು ಮೊಸರನ್ನಾಗಿಸುವ ಕ್ರಿಯೆಯಲ್ಲಿ ನಮ್ಮ ಜೀರ್ಣಾಂಗಗಳು ಮಾಡುವ ಮುಕ್ಕಾಲುಪಾಲು ಕೆಲಸವನ್ನು ಮೊಸರಿನಲ್ಲಿರುವ ಬ್ಯಾಕ್ಟೀರಿಯಾಗಳೇ ಮುಗಿಸಿರುತ್ತವೆ. ಹಾಗಾಗಿ ಮೊಸರು ನಮಗೆ ಅತ್ಯುತ್ತಮವಾದ ಆಹಾರವಾಗಿದೆ. ವೈದ್ಯರೂ ಜೀರ್ಣ ಸಮಸ್ಯೆ ಇರುವ ರೋಗಿಗಳಿಗೆ ಮೊಸರನ್ನೇ ಆಹಾರವನ್ನಾಗಿ ಸ್ವೀಕರಿಸಲು ಸಲಹೆ ಮಾಡುತ್ತಾರೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಊಟದ ಕೊನೆಯಲ್ಲಿ ಮೊಸರು ಇಲ್ಲವಾದಲ್ಲಿ ಊಟ ಎಂಬುದು ಯಾವತ್ತಿಗೂ ಪರಿಪೂರ್ಣವಾಗುವುದಿಲ್ಲ.