ಬೆಂಗಳೂರು: ಮದುವೆಯಾಗುವ ಹುಡುಗ ಹೇಗಿರಬೇಕು ಎಂಬ ಬಗ್ಗೆ ಹುಡುಗಿಯರಲ್ಲಿ ಹಲವು ಲೆಕ್ಕಾಚಾರಗಳಿರುತ್ತವೆ. ಹಾಗಿದ್ದರೂ ಕೆಲವೊಮ್ಮೆ ಲೆಕ್ಕಾಚಾರಗಳು ತಪ್ಪಾಗುತ್ತವೆ. ಹಾಗಾಗಿ ಮದುವೆಗೆ ಮೊದಲು ನಿಮ್ಮ ಹುಡುಗನಲ್ಲಿ ಇಂತಹ ಲಕ್ಷಣಗಳಿದ್ದರೆ ಎಚ್ಚರಿಕೆ ವಹಿಸುವುದು ಒಳ್ಳೆಯದು.ಸಂಶಯ ಪ್ರವೃತ್ತಿ ಮದುವೆಗಿಂತ ಮೊದಲು ಭಾವೀ ಪತಿಯ ಸ್ವಭಾವ ಅರಿಯಿರಿ. ಆತನೊಂದಿಗೆ ಸುತ್ತಾಡುವಾಗ ಆತ ಪ್ರಶ್ನೆ ಮಾಡುವ ರೀತಿ, ಯಾವುದಾದರೂ ವಿಚಾರದ ಬಗ್ಗೆ ನಿಮ್ಮಿಂದ ತಿಳಿದುಕೊಳ್ಳುವ ರೀತಿಯಲ್ಲಿ ನಿಮಗೆ ಆತ ವಿಪರೀತ ಡೌಟು ಪಡುವ ಹುಡುಗ ಎನಿಸಿದ್ದರೆ ಮತ್ತೊಮ್ಮೆ