ಬೆಂಗಳೂರು: ಚಿಕ್ಕ ಮಕ್ಕಳಿಗೆ ಮೈಯೆಲ್ಲಾ ಎಣ್ಣೆ ಹಚ್ಚಿಕೊಂಡು ಮಸಾಜ್ ಮಾಡಿ ನಂತರ ಕಾಲ ಮೇಲೆ ಹಾಕಿ ಬಿಸಿ ಬಿಸಿ ನೀರು ಸುರಿದು ಸ್ನಾನ ಮಾಡಿಸುವ ಖುಷಿಯನ್ನು ನಾವು ಎಲ್ಲರೂ ಅನುಭವಿಸಿರುತ್ತೇವೆ. ಆದರೆ ಇದರಿಂದ ಮಗುವಿಗೆ ಎಷ್ಟೊಂದು ಲಾಭವಿದೆ ಗೊತ್ತಾ? ನಿದ್ರೆ ಮೈಯೆಲ್ಲಾ ಮಸಾಜ್ ಮಾಡುವುದರಿಂದ ಮಗುವಿಗೆ ಸ್ನಾನವಾದ ನಂತರ ಒಳ್ಳೆಯ ನಿದ್ರೆ ಬರುತ್ತದೆ. ಚಿಕ್ಕ ಮಕ್ಕಳಿಗೆ ನಿದ್ರೆ ತುಂಬಾ ಮುಖ್ಯ. ಯಾಕೆಂದರೆ ಅವರ ಬೆಳವಣಿಗೆ ನಡೆಯುವುದೇ ನಿದ್ರೆಯ ಸಮಯದಲ್ಲಿ.