ಬೆಂಗಳೂರು: ಮೆಂತ್ಯ ಪಲಾವ್, ಮೆಂತ್ಯ ರೈಸ್, ಪಲ್ಯ ಸೇವನೆ ಮಾಡುತ್ತಿದ್ದೀರಾ? ಹಾಗಿದ್ದರೆ ಇದು ನಿಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯ ಪ್ರಯೋಜನ ಕೊಡುತ್ತದೆ ಎನ್ನುವುದನ್ನೂ ತಿಳಿಯಿರಿ.ಮಧುಮೇಹ ಮೆಂತ್ಯ ಸೊಪ್ಪು ಮಧುಮೇಹ ನಿಯಂತ್ರಿಸುವ ಗುಣ ಹೊಂದಿದೆ. ಇದು ಟೈಪ್ 1, ಟೈಪ್ 2 ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಸೊಪ್ಪು ತರಕಾರಿ.ಕೊಲೆಸ್ಟ್ರಾಲ್ ಮೆಂತ್ಯ ಸೊಪ್ಪು ಕರುಳಿನಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ಹೀರಿಕೊಳ್ಳುವ ಗುಣ ಹೊಂದಿದೆ. ಅಷ್ಟೇ ಅಲ್ಲದೆ, ಲಿವರ್ ನಲ್ಲಿ ಕೊಬ್ಬಿನಂಶ ಹೆಚ್ಚು ಬಿಡುಗಡೆಯಾಗದಂತೆ ನೋಡಿಕೊಳ್ಳುತ್ತದೆ.