ಬೆಂಗಳೂರು: ಉಪ್ಪಿನಕಾಯಿ ಹೆಚ್ಚು ತಿನ್ನಬೇಡ, ಆರೋಗ್ಯ ಹಾಳಾಗುತ್ತದೆ! ಹೀಗಂತ ಎಲ್ಲರೂ ಎಚ್ಚರಿಕೆ ನೀಡುವುದನ್ನು ಕೇಳಿದ್ದೇವೆ. ಆದರೆ ನಿಜವಾಗಿಯೂ ಉಪ್ಪಿನಕಾಯಿ ನಮ್ಮ ಆರೋಗ್ಯ ಹಾಳು ಮಾಡುತ್ತದಾ? ಉಪ್ಪಿನಕಾಯಿ ತಿಂದರೆ ಅಸಿಡಿಟಿ, ಹೊಟ್ಟೆ ಹುಣ್ಣು ಬರುತ್ತದೆ ಎಂಬ ನಂಬಿಕೆಗಳಿವೆ. ಒಂದು ಮಟ್ಟಿಗೆ ಇದು ನಿಜವೇ ಇರಬಹುದು. ಯಾಕೆಂದರೆ ಅತಿಯಾದರೆ ಅಮೃತವೂ ವಿಷವೇ. ಆದರೆ ಉಪ್ಪಿನಕಾಯಿ ಸೇವನೆಯಿಂದ ಆರೋಗ್ಯಕ್ಕೆ ಲಾಭವೂ ಇದೆ ಗೊತ್ತಾ?ನಿಮಗೆ ಅಚ್ಚರಿಯೆನಿಸಬಹುದು. ಇದರಲ್ಲಿ ಆರೋಗ್ಯಕರ ಆಂಟಿ ಆಕ್ಸಿಡೆಂಟ್, ಪೋಷಕಾಂಶಗಳಿದ್ದು, ಕೆಲವೊಂದು