ಬೆಂಗಳೂರು : ಹಿಂಗು ಅಥವಾ ಇಂಗು, ಇದು ಅತ್ಯಂತ ಪ್ರಾಚೀನವಾದ ಸಂಬಾರು ಪದಾರ್ಥ. ಇದನ್ನು ಆಹಾರದಲ್ಲಿ ಬಳಸಿದರೆ ಅದರ ರುಚಿ ಹೆಚ್ಚುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಭಾರತ ಮತ್ತು ನೇಪಾಳದಲ್ಲಿ ಇದನ್ನು ಔಷಧಿಯಾಗಿಯೂ ಬಳಕೆ ಮಾಡುತ್ತಾರೆ. ಆಯುರ್ವೇದದ ಪ್ರಕಾರ, ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಚಿಟಿಕೆಯಷ್ಟು ಹಿಂಗನ್ನು ಹಾಕಿ ನಿತ್ಯ ಸೇವಿಸುವುದರಿಂದ 7 ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅವು ಯಾವುವೆಂದರೆ, ಹಿಂಗು ಬೆರೆಸಿದ ನೀರು ಹೊಟ್ಟೆಯ ಉರಿಯನ್ನು ಕಡಿಮೆ