ಬೆಂಗಳೂರು: ಜೀರಿಗೆಯ ನೀರಿನಲ್ಲಿ ಹಲವಾರು ಪೋಷಕಾಂಶಗಳಿವೆ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ತೂಕ ಕೂಡ ಇಳಿಯುತ್ತದೆ. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಜೀರಿಗೆ ನೀರು ಸೇವಿಸುವುದರಿಂದ ಏನೆಲ್ಲಾ ಉಪಯೋಗವಿದೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.ನಿದ್ರಾಹೀನತೆ : ಜೀರಿಗೆ ನೀರು ಸೇವನೆಯಿಂದ ಬ್ರೈನ್ ರಿಲ್ಯಾಕ್ಸ್ ಆಗುತ್ತದೆ. ಅಲ್ಲದೆ ನಿದ್ರೆ ಚೆನ್ನಾಗಿ ಬರಲು ಇದು ಸಹಕಾರಿಯಾಗಿದೆ.ಜ್ವರ : ಇದಕ್ಕೆ ಜ್ವರವನ್ನು ಸಹ ನಿವಾರಣೆ ಮಾಡುವ ಶಕ್ತಿ ಇದೆ. ಜೀರಿಗೆ ನೀರನ್ನು ಕುಡಿಯೋದರಿಂದ ದೇಹ ತಂಪಾಗುತ್ತದೆ.