ಆಯುರ್ವೇದದಲ್ಲಿ ಎಳ್ಳಿನ ಎಣ್ಣೆಯ ಪ್ರಾಮುಖ್ಯತೆಯನ್ನು ಬೇರೆ ಯಾವುದೇ ತೈಲ ಬದಲಿಸಲು ಸಾಧ್ಯವಿಲ್ಲ. ನೋಡಲು ತುಂಬಾ ಚಿಕ್ಕದಾಗಿ ಕಾಣುವ ಎಳ್ಳಿನ ಬೀಜಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿವೆ ಎಂಬುದು ಸಾಬೀತಾಗಿದೆ. ಅದಕ್ಕಾಗಿಯೇ ತಜ್ಞರು ಇದನ್ನು ಆಯುರ್ವೇದ ಔಷಧಿಗಳನ್ನು ತಯಾರಿಸಲು ಶತಮಾನಗಳಿಂದ ಬಳಸುತ್ತಿದ್ದಾರೆ. ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ ಎಲ್ಲಾ ಆಯುರ್ವೇದ ಔಷಧಿಗಳಲ್ಲಿ ಸುಮಾರು 40% ಎಳ್ಳು ಬಳಕೆ ಮಾಡಲಾಗುತ್ತದೆ. ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಎಳ್ಳನ್ನು ಸಾಂಪ್ರದಾಯಿಕ