ದ್ರಾಕ್ಷಿಯನ್ನು ಸಾಮಾನ್ಯವಾಗಿ ಹಣ್ಣುಗಳ ರಾಣಿ ಎಂದು ಕರೆಯುತ್ತಾರೆ ಮತ್ತು ಈ ಹಣ್ಣಿನ ಬಣ್ಣವನ್ನು ಆಧರಿಸಿ ಮೂರು ವಿಧಗಳಲ್ಲಿ ಇದನ್ನು ವಿಂಗಡಿಸಲಾಗಿದೆ - ಕೆಂಪು, ಹಸಿರು ಹಾಗೂ ನೀಲಿ/ಕಪ್ಪು. ಈ ಅದ್ಭುತ ಮತ್ತು ಸ್ವಾದಿಷ್ಟವಾದ ಹಣ್ಣು ನಿಮ್ಮ ಆರೋಗ್ಯ ಕಾಪಾಡುವಲ್ಲಿ ಎತ್ತಿದ ಕೈ ಮತ್ತು ಲಾಭಗಳು ಅಧಿಕ. ದ್ರಾಕ್ಷಿಯು ವಿಟಾಮಿನ್ ಸಿ ಅನ್ನು ಹೇರಳವಾಗಿ ಹೊಂದಿದೆ ಹಾಗೂ ತಕ್ಷಣ ಶಕ್ತಿಯನ್ನು ಒದಗಿಸುವ ಸಕ್ಕರೆಯ ಅಂಶವನ್ನು ಸಹ ಹೊಂದಿದೆ ಹಾಗೂ ಉರಿಯೂತ ಕಡಿಮೆ