ಸಾಮಾನ್ಯವಾಗಿ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಚಳಿಗಾಲದಲ್ಲಿ ಕಾಡುವುದು. ಇದನ್ನು ತಡೆಯಲು ದೇಹದ ಪ್ರತಿರೋಧಕ ಶಕ್ತಿಯು ಪ್ರಬಲವಾಗಿ ಇರಬೇಕು. ಇದಕ್ಕಾಗಿ ಚಳಿಗಾಲದಲ್ಲಿ ಯಾವಾಗಲೂ ಬಿಸಿ ಹಾಗೂ ಪೋಷಕಾಂಶಗಳಿರುವ ಆಹಾರ ಸೇವನೆ ಮಾಡಬೇಕು. ಕೆಲವೊಂದು ಗಿಡಮೂಲಿಕೆಗಳು ಹಾಗೂ ಮಸಾಲೆಗಳು ಸಂಪೂರ್ಣ ಆರೋಗ್ಯ ಕಾಪಾಡುವುದು. ಅದರಲ್ಲೂ ಬೆಳ್ಳುಳ್ಳಿಯಿಂದ ತಯಾರಿಸಿದ ವ್ಯಂಜನಗಳು ದೇಹದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಬೆಳ್ಳುಳ್ಳಿಯು ಅಡುಗೆಯ ರುಚಿ ಹಾಗೂ ಸುವಾಸನೆಯನ್ನು ವೃದ್ಧಿಸುವುದು. ಇದನ್ನು ಹಲವಾರು ಬಗೆಯಿಂದ ನಾವು