ಸಾಮಾನ್ಯವಾಗಿ ಮಳೆಗಾಲದಲ್ಲಿ ಹಾಗೂ ಚಳಿಗಾಲದಲ್ಲಿ ಪಾದಗಳ ಹಿಮ್ಮಡಿ ಬಿರುಕಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಚಳಿಗಾಲದಲ್ಲಿ ಪಾದಗಳು ಒಡೆಯುವ ಸಮಸ್ಯೆಯು ಹೆಚ್ಚಿನವರನ್ನು ಕಾಡುವುದು. ಯಾಕೆಂದರೆ ಪಾದವು ಹೆಚ್ಚಾಗಿ ಹೊರಗಿನ ವಾತಾವರಣ, ಧೂಳು ಇತ್ಯಾದಿಗಳಿಗೆ ಒಗ್ಗಿಕೊಳ್ಳುವ ಕಾರಣದಿಂದಾಗಿ ಈ ಸಮಸ್ಯೆಯು ಬರುವುದು. ಅದರಲ್ಲೂ ಚಳಿಗಾಲದಲ್ಲಿ ವಾತಾವರಣವು ತುಂಬಾ ಶುಷ್ಕವಾಗಿರುವ ಕಾರಣ ಪಾದಗಳು ಸೀಳು ಬಿಡುವುದು ಸಾಮಾನ್ಯ. ಹೀಗಾಗಿ ಚಳಿಗಾಲದಲ್ಲಿ ಪಾದಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ದೇಹದ ಪ್ರತಿಯೊಂದು ಅಂಗದ ಬಗ್ಗೆಯೂ ನಾವು