ಜನರಿಗೆ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಕಾರಣದಿಂದ ಆರೋಗ್ಯದ ತೊಂದರೆಗಳು ಎದುರಾಗುತ್ತವೆ. ಚಿಕ್ಕ ವಯಸ್ಸಿಗೆ ತಲೆ ಕೂದಲು ಬೆಳ್ಳಗಾಗುವುದು ಮತ್ತು ಉದುರಿ ಹೋಗುವುದು ಇದರಲ್ಲಿ ಸೇರಿರುತ್ತದೆ. ಹಾಗಾಗಿ ಸಾಧ್ಯವಾದಷ್ಟು ಬೇಗನೆ ನಮ್ಮ ಆಹಾರ ಪದ್ಧತಿಯನ್ನು ಮತ್ತು ಜೀವನಶೈಲಿಯನ್ನು ಒಳ್ಳೆಯ ರೀತಿಗೆ ಬದಲಿಸಿಕೊಂಡರೆ, ಆರೋಗ್ಯಕರವಾದ ಮತ್ತು ಸೊಂಪಾದ ದಟ್ಟಣೆ ಹೊಂದಿರುವ ತಲೆಕೂದಲನ್ನು ಪಡೆಯಲು ಅನುಕೂಲವಾಗುತ್ತದೆ. ಹಾಗಾದರೆ ತಲೆಕೂದಲು ಉದುರುವಿಕೆ ಸಮಸ್ಯೆಯಿಂದ ಹೊರಬರಬೇಕಾದರೆ ಪುರುಷರು ಏನು ಮಾಡಬಹುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ