ನೀವು ಮಾಂಸಾಹಾರ ಸೇವನೆಗೆ ಆಧ್ಯತೆ ನೀಡುತ್ತೀರಾ? ಎಚ್ಚರ ನಿಮ್ಮ ಆಹಾರ ಪದ್ಧತಿ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಸಸ್ಯಾಹಾರ ಆಹಾರ ಪದ್ಧತಿ ರೂಡಿಸಿಕೊಂಡಿರುವವರ ಜೀವಿತಾವಧಿಗಿಂತ ಮಾಂಸಾಹಾರ ಆಹಾರ ಪದ್ಧತಿ ರೂಡಿಸಿಕೊಂಡಿರುವವರ ಜೀವಿತಾವಧಿ ಕಡಿಮೆ ಎಂದು ಸಂಶೋಧನೆಯಿಂದ ಬಹಿರಂಗವಾಗಿದೆ. ಅರಿಜೋನಾದ ಮಾಯೊ ಕ್ಲಿನಿಕ್ ವೈದ್ಯರು ಈ ಸಂಶೋಧನೆಯನ್ನು ಕೈಗೊಂಡಿದ್ದು, 1.5 ಮಿಲಿಯನ್ ಜನರನ್ನು ಬಳಸಿಕೊಂಡು ಅಂಕಿ ಅಂಶಗಳನ್ನು ಸಿದ್ದ ಪಡಿಸಲಾಗಿದೆ. ಈ ಸಂಶೋಧನೆಯಿಂದ ಪ್ರತಿ ದಿನ ಕೆಂಪು ಅಥವಾ ಸಂಸ್ಕರಿತ ಮಾಂಸಾಹಾರ