ಆಲೂಗಡ್ಡೆಇದನ್ನು ಸೇವನೆ ಮಾಡಿದರೆ ಅದು ಆರೋಗ್ಯಕ್ಕೆ ಹಲವಾರು ರೀತಿಯಿಂದ ನೆರವಾಗುವುದು. ಕೆಲವರು ನಿತ್ಯವೂ ತಮ್ಮ ಆಹಾರ ಕ್ರಮದಲ್ಲಿ ಬಟಾಟೆ ಸೇವನೆ ಮಾಡುವರು. ಆದರೆ ಅತಿಯಾದರೆ ಅಮೃತವು ವಿಷ ಎನ್ನುವ ಮಾತಿನಂತೆ ಆಲೂಗಡ್ಡೆಯನ್ನು ಕೂಡ ಅತಿಯಾಗಿ ಸೇವನೆ ಮಾಡಿದರೆ ಅದರಿಂದ ಸಮಸ್ಯೆಗಳು ಕಂಡುಬರುವುದು. ಆಲೂಗಡ್ಡೆಯಲ್ಲಿ ವಿಟಮಿನ್ ಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್ ಗಳೂ, ಪೈಥೋನ್ಯೂಟ್ರಿಯೆಂಟ್ಸ್ ಮತ್ತು ಆಹಾರದ ನಾರಿನಾಂಶವು ಇದೆ. ಆದರೆ ಇದನ್ನು ಮಿತವಾಗಿ ಸೇವನೆ ಮಾಡಬೇಕು. ಇಲ್ಲವಾದಲ್ಲಿ ಅದರಿಂದ ವ್ಯತಿರಿಕ್ತ ಪರಿಣಾಮ