ಬೆಂಗಳೂರು: ಹಲ್ಲಿನ ಆರೋಗ್ಯ ಬಹಳ ಮುಖ್ಯ. ವಸಡಿನ ಸಮಸ್ಯೆ ಹಲವರಿಗೆ ಕಿರಿ ಕಿರಿ ಉಂಟು ಮಾಡುತ್ತಿರುತ್ತದೆ. ವಸಡಿನಲ್ಲಿ ರಕ್ತ ಸೋರುವ ಸಮಸ್ಯೆಗೆ ಆಹಾರದಲ್ಲೇ ಪರಿಹಾರವಿದೆ. ಅದು ಯಾವುದು ನೋಡೋಣ. ವಿಟಮಿನ್ ಸಿ ಆಹಾರಗಳು ವಿಟಮಿನ್ ಸಿ ಅಂಶ ಹೊಂದಿರುವ ಆಹಾರ ಪದಾರ್ಥಗಳನ್ನು ಸಾಕಷ್ಟು ಸೇವಿಸಬೇಕು. ಕಿತ್ತಳೆ, ನಿಂಬೆ ಹಣ್ಣು ಹೆಚ್ಚು ಸೇವಿಸಿದರೆ ವಸಡುಗಳು ಶಕ್ತಿಶಾಲಿಯಾಗುತ್ತವೆ.ಹಾಲು ಹಲ್ಲಿನ ಬೆಳವಣಿಗೆಗೆ ಬೇಕಾದುದು ಕ್ಯಾಲ್ಶಿಯಂ ಅಂಶ. ಕ್ಯಾಲ್ಶಿಯಂ ಅಂಶ ಹೆಚ್ಚಿರುವ ಪದಾರ್ಥವೆಂದರೆ ಹಾಲು.