ಹೆಂಡತಿಗೆ ಗುಪ್ತಾಂಗದಲ್ಲಿ ಸಮಸ್ಯೆಯಿದ್ದರೆ ರೋಮ್ಯಾನ್ಸ್ ಮಾಡಬಹುದೇ?

ಬೆಂಗಳೂರು| Jagadeesh| Last Modified ಶುಕ್ರವಾರ, 8 ನವೆಂಬರ್ 2019 (13:31 IST)
ಪ್ರಶ್ನೆ : ಹೆಂಡತಿ ಸದಾ ಅನಾರೋಗ್ಯ ಪೀಡಿತಳಾಗಿರುತ್ತಾಳೆ. ಆಕೆಗೆ ಹೊಟ್ಟೆ ಹಾಗೂ ಗುಪ್ತಾಂಗದಲ್ಲಿ ಸಮಸ್ಯೆ ಇದೆ.

ಅವಳು ತಿಂಗಳಿಗೊಮ್ಮೆ ಮಾತ್ರ ಮೂಡ್ ಬರಿಸಿಕೊಂಡು ಸುಖ ನೀಡುತ್ತಾಳೆ. ಅದರೆ ನಾನು ಅವಳ ಸುಖದ ವಿಷಯದಲ್ಲಿ ಅತೃಪ್ತನಾಗಿರುವೆ. ಪರಿಹಾರ ತಿಳಿಸಿ.

ಉತ್ತರ: ನಿಮ್ಮ ಪತ್ನಿಯನ್ನು ಉತ್ತಮ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಅಗತ್ಯ ಪರೀಕ್ಷೆಗಳನ್ನು ಮಾಡಿಸಿ. ಅವರು ದೈಹಿಕ ಹಾಗೂ ಮಾನಸಿಕವಾಗಿ ಬಲಿಷ್ಠರಾಗಿ, ಆರೋಗ್ಯವಂತರಾಗುವುದಕ್ಕೆ ಮೊದಲು ಆದ್ಯತೆ ನೀಡಿ.

ನಿಮ್ಮ ಪತ್ನಿ ಆರೋಗ್ಯವಾಗಿದ್ದರೆ ಮಾತ್ರ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ. ನೀವು ಕಾಮ ಬಿಟ್ಟು ಪ್ರೀತಿ ಕೊಟ್ಟು ನೋಡಿ. ಅವಳಿಂದ ಎಲ್ಲವೂ ಸಿಗುತ್ತದೆ. ಬಾಳು ನಂದನವಾಗುತ್ತದೆ.  ಇದರಲ್ಲಿ ಇನ್ನಷ್ಟು ಓದಿ :