ಬೆಂಗಳೂರು : ಅನಾನಸ್ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗೇ ಇದರಿಂದ ಬೇಸಿಗೆಯಲ್ಲಿ ಕಾಡುವ ಸನ್ ಟ್ಯಾನ್ ಗಳಿಂದ ಮುಕ್ತಿ ಹೊಂದಬಹುದು. ಇದರಲ್ಲಿರುವ ವಿಟಮಿನ್ ಸಿ ಚರ್ಮವನ್ನು ಪೋಷಿಸಲು ಸಹಕಾರಿಯಾಗಿದೆ. 1 ಕಪ್ ಅನಾನಸ್ ತಿರುಳಿಗೆ 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಅದನ್ನು 20 ನಿಮಿಷಗಳ ಕಾಲ ಇಟ್ಟು ಬಳಿಕ ತಣ್ಣೀರಿನಲ್ಲಿ ವಾಶ್ ಮಾಡಿ.