ಬೆಂಗಳೂರು: ಹದಿಹರೆಯದ ವಯಸ್ಸಿನಲ್ಲಿ ವಯೋಸಹಜವಾಗಿ ಹಲವು ಲೈಂಗಿಕ ಕಾಮನೆಗಳು ಮನದಲ್ಲಿ ಓಡಾಡುವುದು ಸಹಜ. ಕೆಲವರು ಈ ವಯಸ್ಸಿನಲ್ಲಿ ತಮ್ಮದೇ ಕ್ಲಾಸ್ ನ ಹುಡುಗಿಯ ಜತೆಗೆ ಕ್ರಷ್ ಅಥವಾ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ.ಆದರೆ ಇದು ತಪ್ಪೇ? ಒಂದು ವೇಳೆ ಪ್ರೀತಿ ಮಾಡಬಹುದಾದರೆ ಆಕೆಯ ಜತೆ ಕಾಮದ ವಿಚಾರಗಳನ್ನು ಹಂಚಿಕೊಳ್ಳಬಹುದೇ ಎಂಬ ಗೊಂದಲ ಕಾಡುತ್ತದೆ.ನಿಜವಾಗಿ ಈ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಎಂಬುದೆಲ್ಲಾ ಬರೀ ಆಕರ್ಷಣೆಯಾಗಿರುತ್ತದೆ. ಈ ಸಂದರ್ಭದಲ್ಲಿ ಓದಿನ ಕಡೆಗೆ ಹೆಚ್ಚು ಗಮನಕೊಡಬೇಕು.