ಬೆಂಗಳೂರು : ಒಣ ಹಣ್ಣುಗಳು ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ಅದರಲ್ಲಿ ಪಿಸ್ತಾ ಕೂಡ ಒಂದು. ಬೇಸಿಗೆಯಲ್ಲಿ ಪಿಸ್ತಾ ತಿನ್ನುವುದು ಆರೋಗ್ಯಕ್ಕೆ ಪ್ರಯೋಕಜನಕಾರಿಯಾಗಿದೆ. ಇದು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಪಿಸ್ತಾ ಮೆಗ್ನಿಶಿಯಂ, ಕ್ಯಾಲ್ಸಿಯಂ, ಆ್ಯಂಟಿ ಆಕ್ಸಿಡೆಂಟ್ ಗಳು , ಜೀವಸತ್ವಗಳು ಮತ್ತು ಪ್ರೋಟೀನ್ ಗಳನ್ನೊಳಗೊಂಡಿದೆ. ಇದನ್ನು ಬೇಸಿಗೆಯಲ್ಲಿ ಸೇವಿಸಿದರೆ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಇದನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ ತೂಕ ಕಡಿಮೆಯಾಗುತ್ತದೆ. ಇದರಲ್ಕಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ.ಪಿಸ್ತಾ ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ.