ಬೆಂಗಳೂರು: ಮಹಿಳೆಯರಿಗೆ ಕೆಲವು ಸಮಸ್ಯೆಗಳನ್ನು ಹೇಳಲೂ ಆಗದ ಅನುಭವಿಸಲೂ ಆಗದ ಪರಿಸ್ಥಿತಿ. ಅಂತಹದ್ದರಲ್ಲಿ ಗುಪ್ತಾಂಗದ ತುರಿಕೆಯೂ ಒಂದು. ಇದಕ್ಕೆ ಕಾರಣಗಳು ಹಲವು. ತುರಿಕೆಯಿಂದಾಗಿ ಕೆಲವರಿಗೆ ಆ ಭಾಗ ಕೆಂಪಗಾಗುವುದು, ಕಜ್ಜಿಯಂತಾಗುವುದು, ನೋವು, ಊದಿಕೊಳ್ಳುವುದು ಮುಂತಾದ ಕಿರಿ ಕಿರಿ ಉಂಟಾಗುತ್ತದೆ. ಒದ್ದೆ ಒಳ ಉಡುಪು ಹಾಕಿಕೊಳ್ಳುವುದು, ಶುಚಿಯಿರದ ಒಳಉಡುಪು, ಋತುಮತಿಯಾದ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್ ನ್ನು ಆಗಾಗ ಬದಲಾಯಿಸಿಕೊಳ್ಳದೇ ಇರುವುದು ಕೆಲವು ಕಾರಣಗಳು.ಅದರ ಹೊರತಾಗಿ ಸೋಂಕು ಸಮಸ್ಯೆಯನ್ನು ಮತ್ತಷ್ಟು ಹದಗೆಡಿಸಬಹುದು.